![[Kannada] ಎಲ್ಲಾ ಉತ್ತರಗಳನ್ನು ಮೀರಿ ನಿಂತ ಪ್ರಶ್ನೆ: ಸೃಷ್ಟಿಯ ಕಥೆಗಳಿಂದ ಆತ್ಮದ ಸತ್ಯದವರೆಗೆ.](https://sites.google.com/site/doctorkingsbooks/logo3000X3000.png)
The episode explores various creation stories from different religions and philosophical perspectives on human existence.
[Quick links] [Pause] ಬಹುಶಃ , ಈ ಭೂಮಿಯ ಮೇಲೆ, ತಾನು ಇಲ್ಲಿಗೆ ಹೇಗೆ ಬಂದೆ ಎಂದು ತಲೆಕೆಡಿಸಿಕೊಳ್ಳುವ ಏಕೈಕ ಜೀವಿ ಎಂದರೆ ಮನುಷ್ಯ ಮಾತ್ರ. ಉಳಿದ ಎಲ್ಲ ಜೀವಿಗಳೂ ಈ ಜಗತ್ತಿನಲ್ಲಿ ಬದುಕುಳಿಯುವುದು ಹೇಗೆ? ಎಂಬ ಗಲಿಬಿಲಿಯಲ್ಲಿಯೇ ವ್ಯಸ್ತವಾಗಿವೆ! ಹೆಚ್ಚಿನ ಧರ್ಮಗಳಲ್ಲಿ, 'ಯಾರೋ ಒಬ್ಬ ಸರ್ವಶಕ್ತ ದೇವರು' ಈ ಜಗತ್ತನ್ನು ಸೃಷ್ಟಿಸಿದನು, ಎಂದು ವಿವರಿಸುವ ಸೃಷ್ಟಿಯ ಕಥೆಗಳಿವೆ. ಈ ಕಥೆಗಳಲ್ಲಿ ಹಲವು ವಿಧಗಳಿವೆ. ಸೃಷ್ಟಿಕರ್ತ ಕೂಡ ತಮ್ಮಂತೆಯೇ ಅಧಿಕಾರ, ದಯೆ, ಉದಾರತೆ ಮತ್ತು ಪಿತೃತ್ವದ ಭಾವನೆಗಳನ್ನು ಹೊಂದಿದ್ದಾನೆ, ಎಂದು ಮನುಷ್ಯರು ಕಲ್ಪಿಸಿಕೊಳ್ಳುತ್ತಾರೆ. ಕುರಾನ್ನ 49ನೇ ಅಧ್ಯಾಯದ 13ನೇ ವಚನದಲ್ಲಿ ಅಲ್ಲಾಹನು ಹೀಗೆ ಹೇಳುತ್ತಾನೆ: "ಓ ಮಾನವಕುಲವೇ! ನಾವು ನಿಮ್ಮನ್ನು ಒಬ್ಬ ಪುರುಷ ಮತ್ತು ಒಬ್ಬ ಮಹಿಳೆಯಿಂದ ಸೃಷ್ಟಿಸಿದ್ದೇವೆ. ನೀವು ಒಬ್ಬರನ್ನೊಬ್ಬರು ಗುರುತಿಸಲಿ ಎಂಬ ಕಾರಣಕ್ಕೆ ನಿಮ್ಮನ್ನು ವಿವಿಧ ರಾಷ್ಟ್ರಗಳನ್ನಾಗಿ ಮತ್ತು ಪಂಗಡಗಳನ್ನಾಗಿ ಮಾಡಿದ್ದೇವೆ; ಅಷ್ಟೇ ಹೊರತು ನೀವು ಒಬ್ಬರನ್ನೊಬ್ಬರು ದ್ವೇಷಿಸಲಿಕ್ಕಾಗಿ ಅಲ್ಲ." ಇದೇ ರೀತಿಯ ಕಥೆ ಬೈಬಲ್ನಲ್ಲೂ ಇದೆ. ಅಲ್ಲಿ ದೇವರು ಆಡಮ್ ಮತ್ತು ಈವ್ರನ್ನು ಸೃಷ್ಟಿಸುತ್ತಾನೆ, ಮತ್ತು ಇಡೀ ಮಾನವಕುಲವು ಈ ಮೂಲ ದಂಪತಿಗಳಿಂದಲೇ ಬಂದಿದೆ, ಎಂದು ಹೇಳಲಾಗುತ್ತದೆ. ಇನ್ನು, ಹಿಂದೂ ಧರ್ಮದಲ್ಲಿ, ಜಗತ್ತನ್ನು ಸೃಷ್ಟಿಸಿದ ಬ್ರಹ್ಮನ ಕಥೆಯಿದೆ. ಈ ಎಲ್ಲಾ ಕಥೆಗಳ ಪ್ರಕಾರ, ಸೃಷ್ಟಿಕರ್ತನು ತನ್ನ ಸೃಷ್ಟಿಗಿಂತ ಭಿನ್ನನಾದವನು. ಸೃಷ್ಟಿಕರ್ತನೇ ಮೂಲ ಸೆಲೆ ಮತ್ತು ಸೃಷ್ಟಿಯು ಆ ಮೂಲದಿಂದ ಉದ್ಭವಿಸಿದ ಒಂದು ವಸ್ತು. ಆದರೆ, ಈ ಕಥೆಗಳಲ್ಲಿ ಗಮನಿಸಬೇಕಾದ ಒಂದು ಕುತೂಹಲಕಾರಿ ಅಂಶವೆಂದರೆ, ಇವು ಕೇವಲ ಮನುಷ್ಯರನ್ನು…
Explore listener stats, chart rankings, contacts and more on the Let's THINK : By Dr.King, Swami Satyapriya podcast page.