
ಸ್ವದೇಶ - ವಿದೇಶ
From SatisHFactionKannada Podcast from the US by Satish Hosanagara
April 22, 2026 · 14 min · Season 2 · Episode 4
About this episode
The episode discusses the bittersweet experiences of immigrants adapting to life in a new country and the evolution of communication technology over the years.
ಯಾವಾಗಲೂ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂದು ಅಲ್ಲಿನ ಪೌರತ್ವವನ್ನು ಪಡೆದು ಅಲ್ಲಿಯವರಾಗಿ ಹೋಗೋದು, ಒಂದು ರೀತಿಯ ಕಹಿ-ಸಿಹಿ ಅನುಭವ ಅನ್ನಬಹುದು. ನಾವು ತೊಂಬತ್ತರ ದಶಕದ ಕೊನೆಯಲ್ಲಿ ಬಂದಂತಹ ಟೆಕ್ನಿಕಲ್ ಕೂಸುಗಳು. ಆಗ, ನಾವು ಬಂದ ಹೊಸದರಲ್ಲಿ, ಯಾವುದಾದರೂ ಕನ್ನಡ ಸಂಘದ ಸಮಾರಂಭಕ್ಕೆ ಹೋದಾಗಲೆಲ್ಲ, ಅಲ್ಲಿ ಮಾತಿಗೆ ಸಿಗುತ್ತಿದ್ದ ಹಿರಿಯರು, "ನಾವು ಬಂದು ೨೫ ವರ್ಷಗಳ ಮೇಲಾಯ್ತು..." ಎಂದು ಹೇಳಿದಾಗಲೆಲ್ಲ, ನಮಗೆಲ್ಲ ಆಶ್ಚರ್ಯ, ವಿಸ್ಮಯ, ಜೊತೆಗೆ ಒಂದು ರೀತಿಯ ಗೊಂದಲ ಕೂಡ ಆಗ್ತಾ ಇತ್ತು. ನಮ್ಮ ಜನರೇಶನ್ನಿನವರು ಏನಿದ್ರೂ ಟೆಕ್ನಾಲಜಿ ಕ್ಷೇತ್ರದಲ್ಲಿ ಕೆಲಸ ಮಾಡಲು ಬಂದವರು, ಆದ್ದರಿಂದ ಈ ದೇಶದಲ್ಲಿ ನಾವು ನೋಡಿದ ಕಡಿಮೆ ಹಣ ಎಂದರೆ ಮೂರು ಸಾವಿರ ಡಾಲರುಗಳಷ್ಟು. ಇಲ್ಲಿ ವಿದ್ಯಾರ್ಥಿಗಳಾಗಿ, ವ್ಯಾಸಂಗ ಮತ್ತು ಸಂಶೋಧನೆ ಮಾಡಲು ಬಂದವರ ಹಾಗೆ, ನಾವೇನೂ ಗ್ಯಾಸ್ ಸ್ಟೇಶನ್‌ನಲ್ಲಾಗಲೀ, ಅಂಗಡಿಗಳಲ್ಲಾಗಲೀ ಕೆಲಸ ಮಾಡಿ, ವಾರವಿಡೀ ಬ್ರೆಡ್ ತಿಂದು, ಸೂಪ್ ಕುಡಿದು ಮಲಗಿದ್ದ ಅನುಭವವಂತೂ ನಮ್ಮ ಜನರೇಶನ್ನಿನವರಲ್ಲಿ ಆದದ್ದು ಕಡಿಮೆ ಎನ್ನಬೇಕು. ಅದೇ ಸಮಯದಲ್ಲಿ, ಇಂಟರ್‌ನೆಟ್ಟಿನ ಮಹಿಮೆಯಿಂದ, ದೂರದ ಭಾರತ, ನಾವು ತೊರೆದು ಬಂದ ನಾಡು ಹತ್ತಿರವಾಗತೊಡಗಿತು. ಮೊದಲೆಲ್ಲ ದುಬಾರಿಯಾಗಿದ್ದ, ಇಂಟರ್‌ನ್ಯಾಶನಲ್ ಕರೆಗಳು, ಈ ಕಳೆದ ಇಪ್ಪತ್ತೈದು ವರ್ಷಗಳಲ್ಲಿ, ಒಂದು ನಿಮಿಷಕ್ಕೆ ಒಂದು ಡಾಲರಿನ ರೇಟಿನಿಂದ ಸೊನ್ನೆಗೆ ಇಳಿದು ಬಂದಿದೆ. ಫ಼ೋನ್ ಕರೆಗಳಿಗಿಂತ ಮುಂಚೆ ನನ್ನ ತಲೆಮಾರಿನವರಲ್ಲಿ ಕೆಲವರು, ಭಾರತಕ್ಕೆ ಅಮೇರಿಕದಿಂದ ಪತ್ರಗಳನ್ನು ಬರೆದಿದ್ದೇವೆ. ಊರಿನಲ್ಲಿ ಕೆಲವೇ ಕೆಲವು ಜನರ ಮನೆಗಳಲ್ಲಿ ಫ಼ೋನ್ ಸೌಲಭ್ಯ ಇದ್ದ ಕಾಲದಲ್ಲಿ, ನಮ್ಮ ಹತ್ತಿರದವರಿಗೆ, ಸ್ನೇಹಿತರಿಗೆ ನಾವು ಪತ್ರಗಳನ್ನು…
Topics covered
- immigration
- technology
- communication
- cultural experiences
Keywords
- immigration
- technology
- cultural adaptation
- communication
Mentioned in this episode
Products: international calling cards, internet
More episodes of SatisHFactionKannada Podcast from the US
- ನಾನೇಕೆ ಓದುತ್ತೇನೆ? · April 1, 2026 · 12 min
- AI Agents are here! Now What?! · February 25, 2026 · 11 min
- ಪ್ರವೀಣ ಅವರ ಪರಿಕ್ರಮ ಮತ್ತು ಪರಾಕ್ರಮ! · January 28, 2026 · 23 min
- Season 1 Final Episode (88) · December 30, 2025 · 12 min
- Getting used to AI Agents! · December 17, 2025 · 12 min
- ಎಷ್ಟು ದುಡ್ಡು ಇದ್ರೆ ಒಳ್ಳೇದು? (86) · November 26, 2025 · 10 min
Explore listener stats, chart rankings, contacts and more on the SatisHFactionKannada Podcast from the US podcast page.