
ನಾನೇಕೆ ಓದುತ್ತೇನೆ?
From SatisHFactionKannada Podcast from the US by Satish Hosanagara
April 1, 2026 · 12 min · Season 2 · Episode 3
About this episode
The episode explores the reasons behind writing and the evolution of content creation in society.
ಎಲ್ಲರೂ ನಾನೇಕೆ ಬರೆಯುತ್ತೇನೆ ಅನ್ನೋ ಸ್ವವಿಮರ್ಶೆಯಲ್ಲಿ ತೊಡಗಿರುವಾಗ, ನನಗೇಕೆ ಈ ರೀತಿಯ ಆಲೋಚನೆ ಬಂತು ಅಂತ ಯೋಚಿಸಿಕೊಳ್ಳುತ್ತಾ ಹೋದ ಹಾಗೆ, ಅನೇಕ ಗಹನವಾದ ವಿಷಯಗಳು ಹೊರಬಂದವು. ಅದನ್ನು, ನಿಮ್ಮೆಲ್ಲರ ಜೊತೆಯಲ್ಲಿ ಹಂಚಿಕೊಂಡರೆ ಹೇಗೆ ಎನ್ನಿಸಿದ್ದರಿಂದ ಈ ಲೇಖನವನ್ನು ಬರೆಯುತ್ತಿದ್ದೇನೆ. ಯಾವುದೇ ಒಂದು ಸಮಾಜದಲ್ಲಿ, ನೂರಕ್ಕೆ ಎಷ್ಟು ಜನ ಕ್ರಿಯೇಟಿವ್ ಆಗಿ ಯೋಚಿಸುತ್ತಾರೆ, ಎಷ್ಟು ಜನ ನಿಜವಾಗಿಯೂ ಬರೆಯುತ್ತಾರೆ, ಎಷ್ಟು ಜನ ಅವುಗಳನ್ನು ಓದುತ್ತಾರೆ ಎಂದುಕೊಂಡರೆ ನಿಮಗೆ ಆಶ್ಚರ್ಯವಾಗುತ್ತದೆ. ನೂರು ವರ್ಷಗಳ ಇತಿಹಾಸವನ್ನು ಅಧ್ಯಯನ ಮಾಡಿದರೆ, ಒಂದು ಕಾಲದಲ್ಲಿ ಬರೀ ಪ್ರಿಂಟ್ ಮತ್ತು ರೇಡಿಯೋ ಮಾಧ್ಯಮಕ್ಕೆ ಮೀಸಲಾದ ಜನ ಮತ್ತು ಬರಹಗಾರರು, ನೂರು ವರ್ಷಗಳಲ್ಲಿ ಅದೆಷ್ಟೋ ಪಟ್ಟು ಹೆಚ್ಚಿನ ಮಟ್ಟದಲ್ಲಿ ಕಂಟೆಂಟ್ ಕ್ರಿಯೇಟರ್ಸ್ ಆಗಿ ಕಂಡುಬರುತ್ತಾರೆ. ಇತ್ತೀಚಿನ ಸೋಶಿಯಲ್ ಮೀಡಿಯಾದಲ್ಲಿ ಮಾನವ ನಿರ್ಮಿತ ಕಂಟೆಂಟ್‌ಗಳನ್ನೂ ಮೀರಿ, ಕೃತಕ ಬುದ್ಧಿಮತ್ತೆಯಿಂದ ತಯಾರಾದ ಕಂಟೆಂಟ್‌ಗಳೂ ಇತ್ತೀಚೆಗೆ ನಮ್ಮ ಸುತ್ತಲೂ ಗಿರಕಿ ಹೊಡೆಯತೊಡಗಿವೆ. ಒಂದಾನೊಂದು ಕಾಲದಲ್ಲಿ ಪ್ರೊಫ಼ೆಷನಲ್ ಬರಹಾರರು, ಆಸ್ಥಾನ ಪಂಡಿತರು ಮೊದಲಾದ ಮಹಾನ್/ಗಣ್ಯ ವ್ಯಕ್ತಿಗಳು ಮಾತ್ರ ಒಂದು ಪುಸ್ತಕವನ್ನು ಹೊರ ತರಲು ಸಾಧ್ಯವಾಗುತ್ತಿತ್ತು. ಒಂದು ಉನ್ನತ ಮಟ್ಟದ ಜರ್ನಲ್‌ನಲ್ಲಿ ಪಬ್ಲಿಷ್ ಮಾಡಲು ಸಾಧ್ಯವಾಗುತ್ತಿತ್ತು. ಆಗೆಲ್ಲ ೧-೩% ಪ್ರತಿಶತ ಜನ ಬರೆಯುತ್ತಿದ್ದರೆ, ಮಿಕ್ಕವರು, ಅದರಲ್ಲೂ ಅಕ್ಷರಸ್ಥರು ಅದನ್ನು ಬಳಸುತ್ತಿದ್ದರು, ತಮ್ಮ ಮನರಂಜನೆ ಅಥವಾ ತಿಳುವಳಿಕೆಯ ದೃಷ್ಟಿಯಿಂದ. ಆಗ ಬರೆಯುತ್ತಿದ್ದವರ ಸಂಖ್ಯೆಗೆ ಈಗಿನ ಬರೆಯುವವರ ಸಂಖ್ಯೆಯನ್ನು ಹೋಲಿಸಿದಾಗ, ಪ್ರೊಫ಼ೆಷನಲ್ ಬರಹಗಾರರ ಸಂಖ್ಯೆಯಲ್ಲಿ ಗಣನೀಯ ಹೆಚ್ಚುಳವನ್ನು…
Topics covered
- writing
- creativity
- society
- content creation
Keywords
- self-reflection
- social media
- artificial intelligence
- content creators
Mentioned in this episode
Products: computer
More episodes of SatisHFactionKannada Podcast from the US
- ಸ್ವದೇಶ - ವಿದೇಶ · April 22, 2026 · 14 min
- AI Agents are here! Now What?! · February 25, 2026 · 11 min
- ಪ್ರವೀಣ ಅವರ ಪರಿಕ್ರಮ ಮತ್ತು ಪರಾಕ್ರಮ! · January 28, 2026 · 23 min
- Season 1 Final Episode (88) · December 30, 2025 · 12 min
- Getting used to AI Agents! · December 17, 2025 · 12 min
- ಎಷ್ಟು ದುಡ್ಡು ಇದ್ರೆ ಒಳ್ಳೇದು? (86) · November 26, 2025 · 10 min
Explore listener stats, chart rankings, contacts and more on the SatisHFactionKannada Podcast from the US podcast page.